Current Date 10 Jun, 2026

ಭೂಮಿ ಶೆಟ್ಟಿ ಕೆಂಡದ ಸೆರಗು ಚಿತ್ರಕ್ಕೆ ಬಿಡುಗಡೆ ಭಾಗ್ಯ; ಸೆನ್ಸಾರ್ ಟೆನ್ಷನ್ ಮುಗಿತು ಎಂದ ಡೈರೆಕ್ಟರ್!

ಸ್ಯಾಂಡಲ್‌ವುಡ್‌ನ ಬಿಗ್ ಬಾಸ್ ಖ್ಯಾತಿಯ ನಟಿ ಭೂಮಿ ಶೆಟ್ಟಿ  ಹೆಚ್ಚು ಕಡಿಮೆ ಎರಡು ವರ್ಷದ ಹಿಂದೆ ಒಂದು ಚಿತ್ರ ಮಾಡಿದ್ದರು. ಕೆಂಡದ ಸೆರಗು ಅನ್ನೋದು ಚಿತ್ರಕ್ಕಿಟ್ಟ ಹೆಸರಾಗಿತ್ತು. ಡೈರೆಕ್ಟರ್ ರಾಕಿ ಸೊಮ್ಲಿ ತಮ್ಮದೇ ಕಾದಂಬರಿಯನ್ನ ಆಧರಿಸಿಯೇ ಚಿತ್ರ ಮಾಡಿದ್ದರು. ಕುಸ್ತಿ ಪಟು ಒಬ್ಬಳ ಸಾಹಸದ ಕಥೆ ಇದಾಗಿತ್ತು. ತಾಯಿ ವೇಶ್ಯೆ ಆಗಿರೋದು ಚಿತ್ರದ ಇನ್ನೂ ಒಂದು ಮಗ್ಗಲು ನೋಡಿ. ಇದರ ಜೊತೆಗೆ ನಟಿ ಭೂಮಿ ಶೆಟ್ಟಿ   ಚಿತ್ರದಲ್ಲಿ ಕುಸ್ತಿ ಪಟು ಆಗಿಯೇ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಮುಗಿತು ಬಿಡಿ. ಇದು ಬರೋದೇ ಇಲ್ಲ ಅಂದುಕೊಂಡಿದ್ದವರಿಗೆ ಇದೀಗ ಇಂಟ್ರಸ್ಟಿಂಗ್ ಸುದ್ದಿ.